loading...
loading...

ಪೊಲೀಸ್ ವಶಕ್ಕೆ ಡಿ.ಕೆ ಶಿವಕುಮಾರ್..! | Mumbai Police Detain DK Shivakumar..! Download

Share Firends
Add
  • Published on Jul 10, 2019

  • Mumbai Police on Wednesday detained Water resources minister DK Shivakumar. ಬೆಳಗ್ಗಿನಿಂದ ರಿನೈಸನ್ಸ್ ಹೊಟೇಲ್ ಮುಂದೆ ಅತೃಪ್ತರ ಭೇಟಿಗಾಗಿ ಕಾದು ಕುಳಿತಿದ್ದ ಸಚಿವ ಡಿಕೆ ಶಿವಕುಮಾರ್ ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿಕೆ ಶಿವಕುಮಾರ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹೋಟೆಲ್ ಮುಂಭಾಗ ಯುವ ಕಾಂಗ್ರೆಸ್ ಕಾರ್ಯಕರ್ತರು ಸಹ ಪ್ರತಿಭಟಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಹೋಟೆಲ್ ಸಮೀಪ 144 ಸೆಕ್ಷನ್ ಹಾಕಿ ನಿಷೇಧಾಜ್ಞೆ ವಿಧಿಸಿದ್ದರು. ಆದರೂ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಡಿಕೆಶಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸತತ 6 ಗಂಟೆಗಳ ಕಾಲ ಹೋಟೆಲ್ ಮುಂಭಾಗ ಪ್ರತಿಭಟಿಸಿದ್ದ ಅವರನ್ನು ಪೊಲೀಸರು ತಮ್ಮ ವ್ಯಾನಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಡಿಕೆಶಿ ಜೊತೆ ಸಚಿವ ಜಿಟಿಡಿ, ಬಾಲಕೃಷ್ಣ ಹಾಗೂ ಶಿವಲಿಂಗೇ ಗೌಡ ಅವರನ್ನೂ ವಶಕ್ಕೆ ಪಡೆದಿದ್ದಾರೆ. ಬಿಜೆಪಿ ಮುಖಂಡರಿಬ್ಬರು ಮಂಗಳವಾರ ರಾತ್ರಿ ಅತೃಪ್ತ ಶಾಸಕರನ್ನು ಭೇಟಿಯಾದ ಬೆನ್ನಲ್ಲೇ ಇಂದು ಸಚಿವ ಡಿಕೆ ಶಿವಕುಮಾರ್, ಜಿ.ಟಿ ದೇವೇಗೌಡ ಹಾಗೂ ಶಾಸಕ ಶಿವಲಿಂಗೇ ಗೌಡ ಅವರು ಮುಂಬೈಗೆ ತೆರಳಿದ್ದರು. ಮುಂಬೈಗೆ ಬರುವ ಮಾಹಿತಿ ಬೆನ್ನಲ್ಲೇ ಅಲ್ಲಿನ ಪೊಲೀಸ್ ಅಲರ್ಟ್ ಆಗಿದ್ದು, ಹೋಟೆಲ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದಾರೆ. ಹೀಗಾಗಿ ಹೋಟೆಲ್ ಬಳಿ ಬಂದರೂ ಡಿಕೆಶಿಗೆ ಒಳಗಡೆ ಹೋಗಲು ಸಾಧ್ಯವಾಗಿರಲಿಲ್ಲ. ಹೋಟೆಲ್ ಒಳಗಡೆ ಹೋಗಲು ಪೊಲೀಸರು ನಿರಾಕರಿಸುತ್ತಿದ್ದಂತೆಯೇ ಡಿಕೆಶಿ ಹಾಗೂ ಪೊಲೀಸರ ಮಧ್ಯೆ ಮಾತುಕತೆ ನಡೆದಿತ್ತು. ನಾವು ಒಂದೇ ಕುಟುಂಬದವರು. ನಮ್ಮ ಮಧ್ಯೆ ಸ್ವಲ್ಪ ಸಮಸ್ಯೆ ಆಗಿದೆ. ಅದನ್ನು ನಾವು ಸರಿಪಡಿಸಲು ಬಂದಿದ್ದೇವೆಯೋ ಹೊರತು, ಬೆದರಿಕೆ ಹಾಕಲು ಬಂದಿಲ್ಲ. ನಿನ್ನೆ ಬಿಜೆಪಿಯವರನ್ನು ಬಿಟ್ಟಿದ್ದೀರಿ, ಆದರೆ ಇವತ್ತು ನಮ್ಮವರನ್ನು ಭೇಟಿ ಮಾಡಲು ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರಶ್ನಿಸುವ ಮೂಲಕ ಸಚಿವರು ಮನವಿ ಮಾಡಿಕೊಂಡರೂ ಪೊಲೀಸರು ಸುತಾರಾಂ ಒಪ್ಪಿಲ್ಲ. ಹೀಗಾಗಿ ಇಬ್ಬರು ಮುಖಂಡರೊಂದಿಗೆ ಡಿಕೆಶಿ ಹೋಟೆಲ್ ಹೊರಗಡೆಯೇ ಕಾದು ಕುಳಿತಿದ್ದರು. ಕೊನೆಗೆ ಹೋಟೆಲ್ ಸಿಬ್ಬಂದಿ ಡಿಕೆಶಿ ಹಠಕ್ಕೆ ಮಣಿದು ರೂಮ್ ಕೊಡಲು ನಿರ್ಧಾರ ಮಾಡಿದ್ದರು. ಹೋಟೆಲ್ ಸಿಬ್ಬಂದಿ ಮತ್ತು ಪೊಲೀಸರು ನಡುವೆ ಮಾತುಕತೆ ನಡೆದಿದ್ದು, ಡಿ.ಕೆ.ಶಿವಕುಮಾರ್ ಅವರಿಗೆ ಹೋಟೆಲ್‍ನಲ್ಲಿ ರೂಮ್ ಕೊಡಲು ಒಪ್ಪಿಗೆ ನೀಡಲಾಗಿತ್ತು. ಆದರೆ ಅತೃಪ್ತ ಶಾಸಕರ ತಂಗಿರುವ ಬಿಲ್ಡಿಂಗ್ ಬಿಟ್ಟು ಬೇರೆ ಬಿಲ್ಡಿಂಗ್‍ನಲ್ಲಿ ಡಿಕೆಶಿಗೆ ರೂಮ್ ಕೊಡಲು ಸಿಬ್ಬಂದಿ ಒಪ್ಪಿಗೆ ಸೂಚಿಸಿದ್ದರು. ನನಗೆ ಶಾಸಕರು ಇರುವ ಬಿಲ್ಡಿಂಗ್‍ನಲ್ಲೇ ರೂಮ್ ಬೇಕೇಬೇಕು ಎಂದು ಹೋಟೆಲ್ ಸಿಬ್ಬಂದಿ ಬಳಿ ಶಿವಕುಮಾರ್ ಬಿಗಿ ಪಟ್ಟು ಹಿಡಿದಿದ್ದಾರೆ. ಪೊಲೀಸರು ಮತ್ತು ಸಿಬ್ಬಂದಿ ಡಿಕೆಶಿ ಅವರ ಮನವೊಲಿಸಲು ಪ್ರಯತ್ನ ಮಾಡಿದ್ದರು. ಆದರೂ ಡಿಕೆಶಿ ತನ್ನ ಪಟ್ಟು ಬಿಡದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದರು. View image on TwitterView image on Twitter ANI ✔ @ANI Karnataka Minister DK Shivakumar who after being denied entry, was sitting outside Renaissance - Mumbai Convention Centre Hotel, detained by Mumbai Police.Section 144 had been imposed in the area. 107 2:35 PM - Jul 10, 2019 64 people are talking about this Twitter Ads info and privacy ಡಿಕೆಶಿ ಅವರ ಬೆಳಗ್ಗಿನ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಅತೃಪ್ತರು, ನಮಗೆ ಡಿಕೆಶಿ ಮೇಲೆ ಗೌರವವಿದೆ. ನಾವಿಂದು ಉನ್ನತ ಸ್ಥಾನಕ್ಕೇರಲು ಅವರೇ ಕಾರಣ. ಹೀಗಾಗಿ ಮುಂಬೈನಲ್ಲಿ ಅವರಿಗೆ ಅವಮಾನ ಆಗುವುದು ನಮಗೆ ಸರಿ ಅನ್ನಿಸುತ್ತಿಲ್ಲ. ಆದರೆ ಯಾವುದೇ ಕಾರಣಕ್ಕೂ ನಾವು ಯಾರನ್ನೂ ಭೇಟಿ ಮಾಡಲ್ಲ ಎಂದು ಸ್ಪಷ್ಟ ಪಡಿಸಿದ್ದರು. Keep Watching Us On Youtube At: https://www.youtube.com/user/publictv... Watch More From This Playlist Here: https://www.youtube.com/user/publictv... Read detailed news at www.publictv.in Subscribe on YouTube: https://www.youtube.com/user/publictv... Follow us on Google+ @ https://plus.google.com/+publictv Like us @ https://www.facebook.com/publictv Follow us on twitter @ https://twitter.com/PublicTVnews -------------------------------------------------------------------------------------------------------- Public TV brings to you the latest updates from all walks of life, be it politics or entertainment, religion or sports, crime or any other thing. Keep watching...
  • ಪೊಲೀಸ್ ವಶಕ್ಕೆ ಡಿ.ಕೆ ಶಿವಕುಮಾರ್..! | Mumbai Police Detain DK Shivakumar..! tags

Comments

  • VIKAS Shetty
    VIKAS Shetty 1 week ago

    Jai police Jai Jai police💪💪💪

  • Manjunath Pvr
    Manjunath Pvr 1 week ago

    All dramas for power only not to state or country.

  • Prashan Tha
    Prashan Tha 1 week ago

    Kallana astiyannella badavrige hanchi

  • Ashwini g
    Ashwini g 1 week ago

    First charge him for all the scams he did so far

  • Siddaling Nadakatti

    I think it is too much from congress and jds. Lesson to karnataka voters to bring 1 solid government next time

  • praveen anaji
    praveen anaji 1 week ago

    Thuuuu namge nachike agbeku inta bolimakklige vote hakirodke thuuu

  • venkatesh venky
    venkatesh venky 1 week ago

    Instead doing like fight for water save the farmers

  • mahesh ichangi
    mahesh ichangi 1 week ago

    This is all drama to get sympathy in public, Congress high command and Gandhi family.

  • Chandrashekar puthran

    Good. Goonda and currupt rajakeeya will it's sad end like Dawood. Thanks for the order in Mumbai. What about Bangaluru?. Will governor act?. Siddu holasu rajakeeya.

  • Raju Raj
    Raju Raj 1 week ago

    bahumata illa andru ivarige adhikara beku. thu nin janmakke. ivarige adhikara bekagirodu rajya uddara madok alla. looti hodedu saviraru koti asti madidaralwa adana ulisikollok aste. thu nim janmakke

  • Filterless truth of india

    illi dk arrestu alli worldcup nalli dk out adu cheep run ge,,,obba goonda rajakarani obba gandgabri batsman

  • Maktumhusen Ladasabnavar

    bjp.ನಾಯಕರ ಕುತಂತ್ರ

  • love TV
    love TV 1 week ago (edited)

    Putt him parmently inside jail

  • santosh kumar
    santosh kumar 1 week ago

    After long time back, he saw Mumbai city clearly in police van.

  • GYM RAVI
    GYM RAVI 1 week ago

    Who is happy..that dk arrested....hit here👊😀

  • Karthik DÍTØ
    Karthik DÍTØ 1 week ago

    ಮುಂಬೈ ಪೊಲೀಸರು ಒಳ್ಳೆ ಕೆಲಸ ಮಾಡಿದ್ದಾರೆ ತುಂಬಾ ಧನ್ಯವಾದಗಳು 😂😂😂😂😂😂😂😂😂😂😂😂😂

  • Swamy Gowda
    Swamy Gowda 1 week ago

    Dkc obbarige bekaa e government.....?

  • Chethan Chethu
    Chethan Chethu 1 week ago

    Congress high drama

  • ಸೇನೆ ರೈತ

    ಸ್ಯಾ.....ಕಿತ್ತುಕೋಳ್ಳಬೇಕು

  • Nandeesh R G
    Nandeesh R G 1 week ago

    Congress Resort rajakiya madidaga BJP matadidra ivaga ivaru dodda ivara Tara matadtare